ವಿನೋದ ಕನ್ನಡ (ಸರಳ ಕನ್ನಡ)
ಪ್ರೊ|| ಎಂ ಬಸಣ್ಣ
ಕನ್ನಡವು ಒಂದು ಸುಂದರ ಭಾಷೆ. ಮಾತು ಮಾತ್ರವೇ ಅಲ್ಲ, ಬರಹ ಕೂಡ ಮುದ್ದಾಗಿದೆ. ಕಣ್ಣು ಮತ್ತು ಕಿವಿ ಎರಡಕ್ಕೂ ಸಂತಸ ನೀಡುತ್ತದೆ. ಕನ್ನಡ ಕಲಿಕೆಯೂ ಕೂಡ ಸರಳ ಹಾಗೂ ಸುಲಭ. ಅಲ್ಲದೆ ಹೇಳಿದಂತೆ ಬರೆಯಬಲ್ಲ, ಬರೆದಂತೆ ಓದಬಲ್ಲ ಭಾಷೆ. ಕನ್ನಡದಲ್ಲಿ ಸುಮಾರು 50 (49 ಬಳಕೆಯಲ್ಲಿವೆ) ಅಕ್ಷರಗಳು, ಅಷ್ಟೇ ಸಂಖ್ಯೆಯ ಗುಣಿತಾಕ್ಷರ ಮತ್ತು ಒತ್ತಕ್ಷರಗಳಿವೆ. ಇವುಗಳ ಸಂಖ್ಯೆಯನ್ನು ಮಿತಿಗೊಳಿಸಿ ಲಿಪಿ ಸುಧಾರಣೆ ಮಾಡಬಹುದೇ ಎಂಬ ಪ್ರಶ್ನೆ 80ರ ದಶಕದಲ್ಲಿ, ಅಂದರೆ 30 ವರ್ಷಗಳ ಹಿಂದೆ, ನನ್ನ ಮನದಲ್ಲಿ ಮೂಡಿಬಂದಿತ್ತು. ಅದರಂತೆ ಲಿಪಿ ಸುಧಾರಿಸಿ ನನ್ನ ಸ್ನೇಹಿತರೊಂದಿಗೆ ಹಂಚಿಕೊಂಡಾಗ ನಕಾರಾತ್ಮಕ ಪ್ರತಿಕ್ರಿಯೆ ಬಂತು. ಈಗ ಮತ್ತೊಮ್ಮೆ ಆ ಬಯಕೆ ನನ್ನ ಬೆನ್ನು ಹತ್ತಿ ಲಿಪಿ ಸುಧಾರಿಸಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ. ಇದನ್ನು 2 ಹಂತದಲ್ಲಿ ಮಾಡಬಯಸುತ್ತೇನೆ.
Click A Button <>Pick A Blog